Firm Objectives


ಸಹಕಾರಿಯ ಧ್ಯೇಯ ಮತ್ತು ಉದ್ದೇಶಗಳು


ಸಹಕಾರಿಯ ಸದಸ್ಯರಲ್ಲಿ ಮಿತವ್ಯಯ, ಸ್ವಸಹಾಯ ಮತ್ತು ಸಹಕಾರ ಭಾವನೆಯನ್ನು ಪೆÇ್ರೀತ್ಸಾಹಿಸುವುದು.
ಸದಸ್ಯರ ವಿವಿಧ ರೀತಿಯ ಹೂಡಿಕೆಯ ಅಗತ್ಯತೆಗಳನ್ನು ಪೂರೈಸಲು ವಿವಿಧ ಸೇವೆ ನೀಡುವುದು ಮತ್ತು ಅದಕ್ಕಾಗಿ ಅಂತಹ ಸೇವೆ ನೀಡುವ ಸಂಸ್ಥೆಗಳೊಂದಿಗೆ ಒಡಂಬಡಿಕೆ
   ಮಾಡಿಕೊಳ್ಳುವುದು.
ಸದಸ್ಯರ ವಿವಿಧ ರೀತಿಯ ಅಗತ್ಯಗಳಿಗಾಗಿ ಸಾಲ ಹಾಗೂ ಮುಂಗಡಗಳನ್ನು ಕೊಡಲು ವ್ಯವಸ್ಥೆ ಮಾಡುವುದು.
ಸಹಕಾರಿಯ ಉದ್ದೇಶ ಸಾಧನೆಗಳಿಗೆ ಅಗತ್ಯವಾದ ನಿವೇಶನ, ಕಟ್ಟಡಗಳನ್ನು ಹೊಂದುವುದು. ಸ್ವಾಧೀನಪಡಿಸಿಕೊಳ್ಳುವುದು, ಕಟ್ಟಡ ನಿರ್ಮಿಸುವುದು, ಬದಲಾವಣೆ
   ಮಾಡುವುದು ಮತ್ತು ಇತರೆ ಅಗತ್ಯ ಕಾರ್ಯಗಳನ್ನು ಕೈಗೊಳ್ಳುವುದು.
ಸಹಕಾರಿಯ ಉದ್ದೇಶಗಳ ಈಡೇರಿಕೆಗಾಗಿ ಸದಸ್ಯರಿಗೆ ಬೇಕಾಗುವ ಕೃಷಿ ಸಾಲಗಳಾದ ಅಲ್ಪಾವಧಿ, ಮಧ್ಯಮಾವಧಿ ಸಾಲಗಳನ್ನು ನೀಡುವುದು ಇದರಲ್ಲಿ ದ್ವಿದಳ
   ಧಾನ್ಯಗಳು ಎಣ್ಣೆ ಕಾಳುಗಳು ಹಾಗೂ ವಾಣಿಜ್ಯ ಬೆಳೆಗಳು (ಕಬ್ಬು, ಹತ್ತಿ ಮುಂತಾದವು) ಹಾಗೂ ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು, ಬಾಳೆ, ದ್ರಾಕ್ಷಿ
   ಇನ್ನಿತರ ತೋಟಗಾರಿಕೆ ಬೆಳೆಗಾಗಿ ಸಾಲನೀಡುವುದು ಹಾಗೂ ಅಭಿವೃದ್ದಿ ಕೆಲಸಗಳಿಗಾಗಿ ಸಾಲ ನೀಡುವುದು ಬೋರ್‍ವೆಲ್ ತೆಗೆಸಲು, ವಿದ್ಯುಚ್ಛಕ್ತಿ ಪಡೆಯಲು,
   ಪಂಪ್‍ಸೆಟ್ ಕೆಲಸಗಳಿಗಾಗಿ.
ಭಾಗಶಃ ಅಥವಾ ಸಂಪೂರ್ಣ ಬಾಕಿ ವಸೂಲಿಗೆ ಸಹಕಾರಿಯು ತನ್ನ ಸ್ವಾಧೀನಕ್ಕೆ ಬಂದಿರುವ ಯಾವುದೇ ಆಸ್ತಿ ಪಾಸ್ತಿಗಳನ್ನು ನಿರ್ವಹಣೆ ಹಾಗೂ ವಿಲೇವಾರಿ ಮಾಡುವುದು.
ಸದಸ್ಯರ ಆರ್ಥಿಕ ಉನ್ನತಿಗಾಗಿ ಹಣಕಾಸು ಸಂಗ್ರಹಣೆ ಯೋಜನೆಯನ್ವಯ ಹಾಗೂ ಉಪವಿಧಿಗಳಲ್ಲಿ ತಿಳಿಸಿದ ಪ್ರಕಾರ ಸದಸ್ಯರಿಂದ ಮಾತ್ರ ಠೇವಣಿ ರೂಪದಲ್ಲಿ
   ಹಣವನ್ನು ಸಂಗ್ರಹಿಸುವುದು
ಸಹಕಾರಿಯ ವ್ಯವಹಾರ ವೃದ್ಧಿಯಾಗುವುದಕ್ಕೆ ಮತ್ತು ಬಲಗೊಳ್ಳುವುದಕ್ಕೆ ಅವಶ್ಯವಾದ ಎಲ್ಲಾ ಬಗೆಯ ಕೆಲಸಗಳನ್ನು ಮಾಡುವದು. ಸಹಕಾರಿಯ ಎಲ್ಲಾ ಚಟುವಟಿಕೆಗಳನ್ನು
  ಅಂತರ್ಜಾಲವನ್ನೊಳಗೊಂಡಂತೆ ಇತರ ಅಧುನಿಕ ತಂತ್ರಜ್ಞಾನವನ್ನು ಬಳಸಿ ಸೇವಾ ವಿಸ್ತರಣೆಯನ್ನು ಮಾಡುವದು. ಮತ್ತು ಸಾರ್ವಜನಿಕರಿಗೆ
  ಇ ಸ್ಟಾಂಪಿಂಗ್ ಸೇವೆಯನ್ನು ಒದಗಿಸುವುದು.